ಶ್ರೀ ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹ ಹಾಗೂ ಚಿಂತನೆಗಳ ಸಾಕಾರಕ್ಕಾಗಿ ವಿಸ್ಮಯ ಪ್ರತಿಷ್ಠಾನವು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಿದ್ದು, ಈ ಕುರಿತು ಹಾಗೂ ತೇಜಸ್ವಿಯವರ ಅಸಂಖ್ಯಾತ ಕೊಡುಗೆಗಳ ಮಾಹಿತಿಯನ್ನು ಆಸಕ್ತರಿಗೆ ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಮತ್ತು ಯುವ ಜನತೆಗೆ ತಲುಪಿಸಲು ವಿಸ್ಮಯ ಪ್ರತಿಷ್ಠಾನದ ವೆಬ್ ಸೈಟ್ ರೂಪುಗೊಂಡಿದೆ.

ಕಲಾ ಮಾಧ್ಯಮ, ಸಾಹಿತ್ಯ,ಗ್ರಾಮೀಣ ಆರ್ಥಿಕ ವ್ಯವಸ್ಥೆ, ಜಾಗತೀಕರಣ, ಸಹಜ ಕೃಷಿ, ಸಾವಯವ ಕೃಷಿ, ಉನ್ನತ ತಂತ್ರಜ್ಞಾನ, ಕನ್ನಡ ಭಾಷೆಯ ಬೆಳವಣಿಗೆ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚೆ, ಸಂವಾದಗಳಿಗೆ ಅವಕಾಶ. ಜಗತ್ತಿನ ಅದ್ಭುತ ರಮ್ಯಗಳು ಮತ್ತು ಬಾಹ್ಯಾಕಾಶದ ಕೌತುಕಗಳ ಅನಾವರಣ, ಜೈವಿಕ ಇತಿಹಾಸದ ಬಗ್ಗೆ ಸಮಗ್ರ ಚಿತ್ರಣ, ವನ್ಯಜೀವಿಗಳ ಜೀವನ ಕ್ರಮ, ಮಾಲಿನ್ಯ ನಿಯಂತ್ರಣ, ಜಲಚರಗಳು, ಕೀಟಗಳು, ಪಕ್ಷಿಸಂಕುಲದ ಮಾಹಿತಿ. ಕನ್ನಡದಲ್ಲಿ ತಂತ್ರಾಂಶ ಬಳಕೆ, ಜಾಗತೀಕರಣದ ಪ್ರಭಾವಗಳು, ಸಹಜಕೃಷಿ, ಇ-ಗವರ್ನೆಂಸ್, ಜಲಮೂಲಗಳ ರಕ್ಷಣೆ, ಔಷಧೀಯ ಸಸ್ಯಗಳು..ಇತ್ಯಾದಿ ಮಾಹಿತಿಗಳ ಆಕರವಾಗಿ ಈ ತಾಣ ಬೆಳೆಯಬೇಕಿದೆ.

ಇತ್ತೀಚಿನ ಬೆಳವಣಿಗೆಗಳು

 • ಕಲಾಕೃತಿಯ ಧ್ವನಿಶಕ್ತಿ: ಫೂರ್ಣಚಂದ್ರ ತೇಜಸ್ವಿಯವರ ಕೊನೆಯ ಪತ್ರ - ಲೇಖನಗಳು
 • ತೇಜಸ್ವಿ: ನೆನಪಿನಲ್ಲಿ ಮೂಡಿದ ಚಿತ್ರ - ಪ್ರೊ.ಬಿ.ಎನ್. ಶ್ರೀರಾಮ - ಲೇಖನಗಳು
 • ಆತ್ಮೀಯ ಒಡನಾಟದಲ್ಲಿ - ಪದ್ಮ ಶ್ರೀರಾಮ - ಲೇಖನಗಳು
 • ಕೆ.ಪಿ. ಪೂರ್ಣಚ೦ದ್ರ ತೇಜಸ್ವಿಯವರ ಸ್ಮಾರಕ ಲೋಕಾರ್ಪಣೆ - ಚಿತ್ರಗಳು
 • ನೆನಪಿನ ದೋಣಿಯಲಿ - ಧನಂಜಯ ಜೀವಾಳ ಬಿ.ಕೆ. - ಲೇಖನಗಳು
 • ತೇಜಸ್ವಿ ಇಂದಿಗೂ ಎಂದೆಂದಿಗೂ - ಬಸವರಾಜು - ಲೇಖನಗಳು
 • ತೇಜಸ್ವಿ ನೆನಪು - ಚಿತ್ರಗಳು
 • ತೇಜಸ್ವಿ ಪದಪುಂಜಗಳು - ಚಿತ್ರಗಳು

 
    ಸುದ್ದಿ ಸಮಾಚಾರಗಳು    

* ಪೂರ್ಣಚಂದ್ರ ತೇಜಸ್ವಿ ಸಂಶೋಧನಾ ಕೇಂದ್ರ ಉದ್ಘಾಟನೆ.

* ವಿಸ್ಮಯ ಪ್ರತಿಷ್ಠಾನ ಏ.5 ರಂದು ಮೂಡಿಗೆರೆ ಸಮೀಪದಎತ್ತಿನಭುಜದಲ್ಲಿ ಚಾರಣ ಕಾರ್ಯಕ್ರಮವಿತ್ತು

* ಕೀಟಗಳ ಸಂಗ್ರಹಾಲಯ, ಸೀತೆಹೂಗಳ ಆರ್ಕಿಡೋರಿಯಂ, ಚಿಟ್ಟೆಗಳ ಉದ್ಯಾನ ಸ್ಥಾಪನೆ ತೇಜಸ್ವಿ ಕನಸು

* ಅವಿರತ , ಈಕವಿ, ಮೇಪ್ಲವರ್ ಮೀಡಿಯಾ ಸೇರಿದಂತೆ ಹಲವು ಸಂಸ್ಥೆಗಳಿಂದತೇಜಸ್ವಿ ಸ್ಮರಣೆ

* ತೇಜಸ್ವಿ ವಿಸ್ಮಯ .ಕಾಂ ಗೆ ಲಂಕೇಶ್ ಬಳಗದ ಸತ್ಯಮೂರ್ತಿ ಆನಂದೂರ್ , ಮಂಜುನಾಥ ಅಜ್ಜಂಪುರ, ರೇಷ್ಮೆ ಅವರಿಂದ ಶುಭ ಹಾರೈಕೆ.

ದೃಶ್ಯ ವೈಭವ    
 
ಚಿತ್ರಗಳು