ಪ್ರಸ್ತಾವನೆ:
ಸೃಜನ ಶೀಲತೆಗೆ ಮತ್ತೊಂದು ಹೆಸರಂತಿದ್ದ ಪೂರ್ಣಚಂದ್ರ ತೇಜಸ್ವಿಯವರ ಹಠಾತ್ ನಿರ್ಗಮನದಿಂದ ಮಲೆನಾಡು ಇನ್ನೆಂದಿಗಿಂತಲೂ ಮೌನವಾಗಿರುವುದಂತೂ ನಿಜ. ನಾಡಿನ ಅಸಂಖ್ಯಾತ ಜನರಿಗೆ ಜೀವನ ಪ್ರೀತಿ, ಚೈತನ್ಯದ ಚಿಲುಮೆಯಾಗಿದ್ದ ತೇಜಸ್ವಿಯವರು ಕಂಡ ಕನಸುಗಳು ಹಲವಾರು. ತೇಜಸ್ವಿಯವರ ವೈಚಾರಿಕ ದೃಷ್ಟಿಯನ್ನು, ಅವರ ಬರಹದ ಆಶಯವನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ "ವಿಸ್ಮಯ ಪ್ರತಿಷ್ಠಾನ" ಟ್ರಸ್ಟ್ ಅನ್ನು ರೂಪಿಸಲಾಗಿದೆ.

ತೇಜಸ್ವಿಯವರ ವೈಚಾರಿಕ ಮೌಲ್ಯಗಳು, ಪರಿಸರ ಪ್ರಜ್ಞೆ, ಪ್ರಯೋಗಶೀಲ ಮನೋಭಾವ, ವಾಸ್ತವವಾದ, ವೈವಿಧ್ಯ ಪೂರ್ಣ ಸಾರ್ಥಕ ಬದುಕು ಎಲ್ಲರಿಗೂ ಅನುಕರಣೀಯ. ಅವರ ವಿಚಾರಧಾರೆಯನ್ನು ಮುಂದಿನ ಪೀಳಿಗೆಯತ್ತ ಕೊಂಡೊಯ್ಯುವ ಜವಾಬ್ದಾರಿಯನ್ನು ಹೊತ್ತಿರುವ ವಿಸ್ಮಯ ಟ್ರಸ್ಟ್ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಯೋಜನೆಗಳು ಸಾಕಾರಗೊಳ್ಳಲು ಎಲ್ಲಾ ಸ್ತರದ ಜನತೆಯ ಪಾಲ್ಗೊಳ್ಳುವಿಕೆ ಮುಖ್ಯ.

ಟ್ರಸ್ಟ್ ಬಗ್ಗೆ ವಿವರ:
ವಿಸ್ಮಯ ಪ್ರತಿಷ್ಠಾನ, ಮೂಡಿಗೆರೆ -577132

ಮೂಲ ಉದ್ದೇಶ: ಪೂರ್ಣಚಂದ್ರ ತೇಜಸ್ವಿಯವರ ಬದುಕು -ಬರಹ-ಚಿಂತನೆಗಳ ಸಾಕಾರ.

ಸ್ಥಾಪನೆ: 2007

ನೋಂದಣಿ ಸಂಖ್ಯೆ: bk IV MGE-4-00062-2007-08

ಸಂಸ್ಥಾಪಕರು:ಗಂಗಯ್ಯ ಹೆಗ್ಗಡೆ

ಅಧ್ಯಕ್ಷರು: ಬಿ.ಎಲ್ .ಶಂಕರ್ [blshankar@tejaswivismaya.com]

ಉಪಾಧ್ಯಕ್ಷರು: ಪ್ರದೀಪ್ ಕೆಂಜಿಗೆ [pradeep.kenjige@tejaswivismaya.com]

ಕಾರ್ಯದರ್ಶಿಗಳು:
ಧನಂಜಯ ಜೀವಾಳ ಬಿ.ಕೆ [jeevala@tejaswivismaya.com]
ವಿನಯ ಪ್ರಸಾದ್ ಸಿ.ಡಿ

ಸಹ ಕಾರ್ಯದರ್ಶಿಗಳು:
ಗಣೇಶ್ ಮಗ್ಗಲಮಕ್ಕಿ [ganesh@tejaswivismaya.com]
ಸಾಥಿ ಸುಂದರೇಶ್

ಖಜಾಂಜಿಗಳು: ರಾಘವೇಂದ್ರ ಆರ್

ವಿಳಾಸ:
ಅಂಚೆ ಪೆಟ್ಟಿಗೆ :72
ಮೂಡಿಗೆರೆ-577132
ಚಿಕ್ಕಮಗಳೂರು ಜಿಲ್ಲೆ

 
    ಸುದ್ದಿ ಸಮಾಚಾರಗಳು    

* ಪೂರ್ಣಚಂದ್ರ ತೇಜಸ್ವಿ ಸಂಶೋಧನಾ ಕೇಂದ್ರ ಉದ್ಘಾಟನೆ.

* ವಿಸ್ಮಯ ಪ್ರತಿಷ್ಠಾನ ಏ.5 ರಂದು ಮೂಡಿಗೆರೆ ಸಮೀಪದಎತ್ತಿನಭುಜದಲ್ಲಿ ಚಾರಣ ಕಾರ್ಯಕ್ರಮವಿತ್ತು

* ಕೀಟಗಳ ಸಂಗ್ರಹಾಲಯ, ಸೀತೆಹೂಗಳ ಆರ್ಕಿಡೋರಿಯಂ, ಚಿಟ್ಟೆಗಳ ಉದ್ಯಾನ ಸ್ಥಾಪನೆ ತೇಜಸ್ವಿ ಕನಸು

* ಅವಿರತ , ಈಕವಿ, ಮೇಪ್ಲವರ್ ಮೀಡಿಯಾ ಸೇರಿದಂತೆ ಹಲವು ಸಂಸ್ಥೆಗಳಿಂದತೇಜಸ್ವಿ ಸ್ಮರಣೆ

* ತೇಜಸ್ವಿ ವಿಸ್ಮಯ .ಕಾಂ ಗೆ ಲಂಕೇಶ್ ಬಳಗದ ಸತ್ಯಮೂರ್ತಿ ಆನಂದೂರ್ , ಮಂಜುನಾಥ ಅಜ್ಜಂಪುರ, ರೇಷ್ಮೆ ಅವರಿಂದ ಶುಭ ಹಾರೈಕೆ.

ದೃಶ್ಯ ವೈಭವ    
 
ಚಿತ್ರಗಳು