ತೇಜಸ್ವಿ ನೆನಪು: ೧೯೩೮ ನೇ ಇಸವಿ ಸೆಪ್ಟೆಂಬರ್ ೦೮ ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳಿಯಲ್ಲಿ ಕೆ.ವಿ.ಪುಟ್ಟಪ್ಪ(ಕುವೆಂಪು) ಹಾಗೂ ಹೇಮಾವತಿ ದಂಪತಿಗಳಿಗೆ ಜನಿಸಿದ ತೇಜಸ್ವಿಯವರು, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪೂರ್ಣಚಂದ್ರನಂತೆ ಬೆಳಗಿದರು. ನವೋದಯ ಕಾಲದ ಸಾಹಿತಿಗಳಲ್ಲಿ ತಮ್ಮದೇ ಆದ ಹೊಸ ತರದ ಬರವಣಿಗೆಗೆ ಹೆಸರಾಗಿದ್ದರು. ಇವರ ಸಾಹಿತ್ಯ ಹಲವರಿಗೆ ಚಂದ್ರನ ಬೆಳಕಂತೆ ತಂಪು ನೀಡಿದರೆ, ಕೆಲವರಿಗೆ ತೇಜಸ್ಸಿನ ಪ್ರಕರ ಬಿಸಿಲಾಯಿತು. ಸ್ವತಃ ಬರಹಗಾರ, ಕೃಷಿಕ, ಪರಿಸರ ಪ್ರೇಮಿ, ಸಂಶೋಧಕ, ತಂತ್ರಜ್ಞ, ಫೋಟೋಗ್ರಾಫರ್. . . ಇತ್ಯಾದಿ ಆಗಿದ್ದ ತೇಜಸ್ವಿ, ಎಲ್ಲಕ್ಕಿಂತ ಮಿಗಿಲಾಗಿ ಶ್ರೇಷ್ಠ ಮಾನವತವಾದಿ ಆಗಿದ್ದರು. ಇವರ ಕೃತಿಗಳಲ್ಲಿ ಪರಿಸರ ಪ್ರಜ್ಞೆ ಹಾಗೂ ಮಾನವೀಯ ಮೌಲ್ಯಗಳು ಎದ್ದು ಕಾಣುತ್ತವೆ. ಇಂತಹ ತೇಜಸ್ವಿ ಚಿಕ್ಕಮಗಳೂರಿನ ಮೂಡಿಗೆರೆಯ ತಮ್ಮ ಮನೆ ನಿರುತ್ತರದಿಂದ ಬಾರದ ಲೋಕಕ್ಕೆ ಏಪ್ರಿಲ್ ೦೫, ೨೦೦೭ರಂದು ನಿರ್ಗಮಿಸಿದ್ದು ದುರದೃಷ್ಟವೇ ಸರಿ.

"ಸೋಮುವಿನ ಸ್ವಗತಲಹರಿ ಮತ್ತು ಇತರ ಕವನಗಳು", "ಬೃಹನ್ನಳೆ", ಇವರ ಕವನ ಸಂಕಲನಗಳು. "ಅಬಚೂರಿನ ಪೋಸ್ಟಾಫೀಸು", "ಹುಲಿಯೂರಿನ ಸರಹದ್ದು" ಇವರ ಕಥಾ ಸಂಗ್ರಹಗಳು. "ಚಿದಂಬರ ರಹಸ್ಯ", "ಕರ್ವಾಲೋ", "ಕಿರಿಗೂರಿನ ಗಯ್ಯಾಳಿಗಳು" ಇವರ ಕಾದಂಬರಿಗಳು. "ವ್ಯಕ್ತಿ ವಿಶಿಷ್ಟ ಸಿದ್ಧಾಂತ", ತೇಜಸ್ವಿ ಅವರ ಒಂದು ಚಿಂತನ ಮಂಥನ ವೈಚಾರಿಕ ಕೃತಿ.

ಇವರು ತಮ್ಮ ಮಲೆನಾಡು ಜೀವನದ ಅನುಭವದಿಂದ ಬರೆದ ಕೃತಿಗಳು 'ಪರಿಸರದ ಕಥೆ' ಮತ್ತು 'ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು'.

ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇದರಲ್ಲಿ ಕೀಟಗಳು, ಪ್ರಾಣಿಗಳು, ನದಿ ಕೊಳ್ಳಗಳು, ಕಾಡುಗಳು, ಬೇಟೆಯ ವೈವಿಧ್ಯತೆಯಬಗ್ಗೆ ಹಲವಾರು ಕೃತಿಗಳನ್ನು ನೀಡಿದ್ದಾರೆ. ಇವರ "ಕರ್ವಾಲೋ" ಕೃತಿಯಲ್ಲಿ, ಜೀವವಿಕಾಸ ಪಥದಲ್ಲಿ ಎಲ್ಲವೂ ಬದಲಾಗುತ್ತ ರೂಪಾಂತರ ಹೊಂದುತ್ತಾ ಬಂದಿರುವಾಗ ಹಾರುವ ಓತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೇಶಗಳು ಮೂಡಿ ಬಂದಿವೆ.

ಶುಧ್ಧ ಸಾಹಿತ್ಯಿಕ ಮೌಲ್ಯವುಳ್ಳ ಕಥೆ ಕಾದಂಬರಿಗಳ ಸಂಗಡ ತೇಜಸ್ವಿಯವರು ಹಲವಾರು ವೈಜ್ಞಾನಿಕ ಹಾಗು ಐತಿಹಾಸಿಕ ಸಂಕಲನಗಳನ್ನು ಕನ್ನಡಕ್ಕೆ ತಂದಿದ್ದಾರೆ. ಮಹಾಯುಧ್ಧ, ಹಾರುವ ತಟ್ಟೆಗಳು, ಮಹಾನದಿ ನೈಲ್ ಇತ್ಯಾದಿ.

ಅಲೆಮಾರಿಯ ಅಂಡಮಾನ್ ತೇಜಸ್ವಿಯವರ ಅಂಡಮಾನ್ ಪ್ರವಾಸ ಕಥನ. ಈ ಕೃತಿಯು ಕನ್ನಡ ಪ್ರವಾಸ ಕಥನಗಳಲ್ಲೇ ವಿಶಿಷ್ಠ ಸ್ಥಾನವನ್ನು ಪಡೆದುಕೊಂಡಿದೆ.

ಪೂರ್ಣಚಂದ್ರ ತೇಜಸ್ವಿ ಅವರು ಬರೆದಿರುವ "ಅಬಚೂರಿನ ಪೋಸ್ಟಾಫೀಸು", "ತಬರನ ಕಥೆ" ಕೃತಿಗಳು ಚಲನಚಿತ್ರಗಳಾಗಿ ಪ್ರಶಸ್ತಿ ಗಳಿಸಿವೆ. "ಕುಬಿ ಮತ್ತು ಇಯಾಲ" ಚಿತ್ರವು ರಾಷ್ಟ್ರ ಪ್ರಶಸ್ತಿ ಗಳಿಸಿತು. "ಚಿದಂಬರ ರಹಸ್ಯ" ಪತ್ತೇದಾರಿ ವಿಧಾನದ ವಸ್ತು ಹೊಂದಿದ್ದು ಈ ಕಾದಂಬರಿಗೆ ವರ್ಷದ ಉತ್ತಮ ಕೃತಿ ಬಹುಮಾನ ದೊರೆತುದಲ್ಲದೆ, ೧೯೮೭ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಾಪ್ತವಾಯಿತು. ಕರ್ನಾಟಕ ಸಾಹಿತ್ಯ ಅಕಾಡೆಮಿಯೂ ಸಹ ಅದೇ ವರ್ಷ ತೇಜಸ್ವಿ ಅವರಿಗೆ ಗೌರವ ಪ್ರಶಸ್ತಿ ನೀಡಿದೆ.

courtesy:kendasampige.com

• ಮಾಯಾಲೋಕ
•  ಪರಿಸರದ ಕತೆ
•  ರುದ್ರಪ್ರಯಾಗದ ಭಯಾನಕ ನರಭಕ್ಷಕ - ಜಿಮ್ ಕಾರ್ಬೆಟ್‍ರವರ 'Man eating Leapord of Rudraprayag' ಕೃತಿಯ ಅನುವಾದ.
•  ಅಬಚೂರಿನ ಪೋಸ್ಟಾಫೀಸು
•  ತಬರನ ಕಥೆ
•  ಚಿದಂಬರ ರಹಸ್ಯ
•  ಕರ್ವಾಲೋ
•  ಅಣ್ಣನ ನೆನಪು
•  ಜುಗಾರಿ ಕ್ರಾಸ್
•  ಮಿಸ್ಸಿಂಗ್ ಲಿಂಕ್
•  ಕಿರಿಗೂರಿನ ಗಯ್ಯಾಳಿಗಳು
•  ಕಾಡಿನ ಕಥೆಗಳು (ಭಾಗ ೧-೪) - ಕೆನ್ನೆತ್ ಆಂಡರ್ಸನ್ ರವರ ಕಥೆಗಳ ಅನುವಾದ
•  ಪ್ಯಾಪಿಲಾನ್ - ಹೆನ್ರಿ ಛಾರೇರೆ ರವರ 'Papillon' ಕೃತಿಯ ಅನುವಾದ
•  ಅಲೆಮಾರಿಯ ಅಂಡಮಾನ್ ಹಾಗು ಮಹಾನದಿ ನೈಲ್
•  ಪಾಕ ಕ್ರಾಂತಿ ಮತ್ತು ಇತರ ಕತೆಗಳು

 
    ಸುದ್ದಿ ಸಮಾಚಾರಗಳು    

* ಪೂರ್ಣಚಂದ್ರ ತೇಜಸ್ವಿ ಸಂಶೋಧನಾ ಕೇಂದ್ರ ಉದ್ಘಾಟನೆ.

* ವಿಸ್ಮಯ ಪ್ರತಿಷ್ಠಾನ ಏ.5 ರಂದು ಮೂಡಿಗೆರೆ ಸಮೀಪದಎತ್ತಿನಭುಜದಲ್ಲಿ ಚಾರಣ ಕಾರ್ಯಕ್ರಮವಿತ್ತು

* ಕೀಟಗಳ ಸಂಗ್ರಹಾಲಯ, ಸೀತೆಹೂಗಳ ಆರ್ಕಿಡೋರಿಯಂ, ಚಿಟ್ಟೆಗಳ ಉದ್ಯಾನ ಸ್ಥಾಪನೆ ತೇಜಸ್ವಿ ಕನಸು

* ಅವಿರತ , ಈಕವಿ, ಮೇಪ್ಲವರ್ ಮೀಡಿಯಾ ಸೇರಿದಂತೆ ಹಲವು ಸಂಸ್ಥೆಗಳಿಂದತೇಜಸ್ವಿ ಸ್ಮರಣೆ

* ತೇಜಸ್ವಿ ವಿಸ್ಮಯ .ಕಾಂ ಗೆ ಲಂಕೇಶ್ ಬಳಗದ ಸತ್ಯಮೂರ್ತಿ ಆನಂದೂರ್ , ಮಂಜುನಾಥ ಅಜ್ಜಂಪುರ, ರೇಷ್ಮೆ ಅವರಿಂದ ಶುಭ ಹಾರೈಕೆ.

ದೃಶ್ಯ ವೈಭವ    
 
ಚಿತ್ರಗಳು